ಇಬ್ನ್ ಅಲ್ ಫಾರಡಿ 
	962-1013. ಅರೇಬಿಯ ದೇಶದ ಒಬ್ಬ ಇತಿಹಾಸಕಾರ. ಅಂಡಲೂಸಿಯದ ವಿದ್ವಾಂಸರ ಬಗ್ಗೆ ಈತ ಬರೆದ ಚರಿತ್ರೆ ತಾರೀಖಲ್‍ಅಮಾಲ್ ಬಹು ಮುಖ್ಯವಾದ ಗ್ರಂಥ. (1891ರಲ್ಲಿ ಎಫ್. ಕೊಡೆರ ಎಂಬಾತ ಇದನ್ನು ಸಂಪಾದಿಸಿದ). ಸ್ಪೇನಿನ ಕಾರ್ಡೊಬ ಎಂಬಲ್ಲಿ ಜನಿಸಿದ. ನ್ಯಾಯಶಾಸ್ತ್ರವನ್ನೂ ಮತಧರ್ಮ ಶಾಸ್ತ್ರಗಳನ್ನೂ ಚೆನ್ನಾಗಿ ಓದಿ ಘನ ಪಂಡಿತನಾದ. 992ರಲ್ಲಿ ಮೆಕ್ಕಾಯಾತ್ರೆಯನ್ನು ಕೈಗೊಂಡು, ಅಲ್ಲಿ ಸ್ವಲ್ಪಕಾಲವಿದ್ದು, ಅನಂತರ ಈಜಿಪ್ಟ್ ಟ್ಯೂನಿಸ್‍ಗಳಲ್ಲಿ ಇರತೊಡಗಿದ. 1009ರಲ್ಲಿ ಸ್ಪೇನಿಗೆ ಹಿಂದಿರುಗಿದ ಮೇಲೆ ಈತನನ್ನು ನ್ಯಾಯಾಧೀಶನನ್ನಾಗಿ ನೇಮಕ ಮಾಡಿ ವಾಲೆನ್ಸಿಯ ಎಂಬಲ್ಲಿಗೆ ಕಳುಹಿಸಲಾಯಿತು. ಬರ್ಬರರು ಕಾರ್ಡೊಬದ ಮೇಲೆ ಅಕ್ರಮಣ ಮಾಡಿ ಪಟ್ಟಣವನ್ನು ಲೂಟಿ ಮಾಡಿದಾಗ ಯಾರೋ ದುರಾತ್ಮರು ಈತನನ್ನು ಕೊಂದರು. ಅಂಡಲೂಸಿಯದ ಕವಿ ಕಾವ್ಯಗಳ ಚರಿತ್ರೆಯೊಂದನ್ನೂ ಈತ ಬರೆದಿದ್ದಾನೆ.				
	(ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ